Monday 12 March 2018

#ಭಾವಗಳ ತೇರು #

ಭಾವಗಳ ತೇರಿಂದು 
ಶೃಂಗಾರಗೊಂಡಿತ್ತು,
ಬಣ್ಣಬಣ್ಣದ ಕನಸುಗಳು 
ನನಸ ನಗರಿಯಲ್ಲಿ..

ಪಟಪಟ ಹಾರಾಡುತ್ತಿದ್ದವು 
ಸಂಭ್ರಮದ ಪತಾಕೆಗಳು,
ಹಾದಿಯುದ್ದಕ್ಕೂ ಒಲವಿನ
ಹೂಗಳ ರಾಶಿಯೇ ಚೆಲ್ಲಿ...

ಸುತ್ತಲೂ ನಗು ,ಕೇಕೇಗಳ ಕಲರವರಂಗೇರಿತ್ತು...
ಅಲ್ಲಲ್ಲಿ ಬಿಳಿಮೊಡಗಳ ದಂಡು
ನಿಂತು ನೋಡುತ್ತಿತ್ತು..

ಆ ವೈಭವದ ,ಸಂತಸದ ಪರಿಯಗಳನು ಏನೆಂಬೆ,
ಶಬ್ದಗಳಿಗೆ ನಿಲುಕದಷ್ಟು...
ಕಣ್ತುಂಬಿಕೊಂಡಷ್ಟು  ಕಣ್ಣೆವೆಗಳು ದಣಿಯದಷ್ಟು ...


.......ಗಾಯತ್ರಿ....
#ಭಾವಾಂತರಂಗದೊಳು##

ಮೌನದಲಿ ಗುನುಗುತ್ತಿದೆ 
  ನನ್ನುಸಿರ  ಕೊರಳೊಂದು
ಕ್ಷಣ ಕ್ಷಣವೂ ಹನಿಯುತ್ತಿದೆ
ಒಲವ ಧಾರೆಯೊಂದು...

ಅತಿಯಾಸೆ ಎನಿಲ್ಲ
ತುಸು ಪ್ರೀತಿ ಸಾಕಲ್ಲ
ಜೊತೆಯಾಗಿ ನೀ ಬಂದು
ಇನಿತೊಂದು ಖುಷಿ ನೀಡು
ಮನವಿಂದು ಮುದಗೊಂಡು
ಬರೆದೊಂದು ಹೊಸ ಭಾಷ್ಯ ಬದುಕಿಗೊಂದು

ನೀನಿರದೆ ಬದುಕಿಲ್ಲವೆಂದಲ್ಲ
ಭಾವನೆಗಳು ನಿರ್ಜೀವವಾದಂತೆ
ಮೌನವೂ ಸ್ಥಬ್ದವಾದಂತೆ
ಮಾತಲ್ಲಿ ರಸವಿರದಂತೆ
ಜೀವಕೆ ಅರ್ಥವಿರದೆ 
ಬದುಕಬೇಕಲ್ಲ ಅಂತಷ್ಟೇ....

ನೀನೆನಗೆ ಬೇಕು 
ನೀನೇ ಬೇಕು
ನೀನು ನನಗಾಗಿ ಬೇಕು
ನೀನು ನಾನಾಗಿ ಬೇಕು
ಅಷ್ಟೇ......ಸಾಕು
ಇಷ್ಟಿದ್ದರೆ ಇನ್ನೇನು ಬೇಕು.....


....ಗಾಯತ್ರಿ...

Monday 18 December 2017

##ಭಾವಾಂತರಂಗದೊಳು ##

ಚಂಚಲ ಮನಸ್ಸು..
******************
ಕೆಲವೊಮ್ಮೆ ನಮಗೆ ನಮ್ಮ ಆತ್ಮೀಯರ ಮೇಲೆ ವಿನಾಕಾರಣ ಕೋಪ ಬಂದುಬಿಡುತ್ತೆ.ಯಾಕೆ ಅಂತ ನಮಗೇ ಗೊತ್ತಿರಲ್ಲ.ಅವರು ನಮ್ಮನ್ನು ಕಡೆಗಣಿಸಿರೊದಕ್ಕೊ ,ಅಥವಾ ಅವರಿಂದ ನಮ್ಮ ಎಕ್ಸಪೆಕ್ಟೇಶನ್ ಜಾಸ್ತಿ ಇರೊದಕ್ಕೊ ....
??????
ನಮ್ಮ ಮನಸ್ಸಿಗೆ ತೃಪ್ತಿಯಾಗದೇ ಇರೊವಷ್ಟು ಪ್ರೀತಿ ಅವರಿಂದ ಸಿಗದೇ ಇರೊದಕ್ಕೊ ..?..ಯಾವುದು ಅಂತ ಸರಿಯಾದ ಕಾರಣ ನಮಗೇ ತಿಳಿಯದೇ ಮನಸ್ಸು ಉದ್ವಿಘ್ನಗೊಂಡು ಅವರಮೇಲೆ ಕೋಪಗೊಳ್ಳುತ್ತದೆ...ನಮ್ಗೆ ಅವರ ಹತ್ತಿರ ಮಾತಾಡಿ ವಿಮರ್ಶೆ ಮಾಡಿ ಬಗೆಹರಿಸಿಕೊಳ್ಳುವಷ್ಟು ಸಹನೇನೂ ಇರೋದಿಲ್ಲ..ಹಾಂಗಂತ ಆ ಕೋಪ ಜಾಸ್ತಿಹೊತ್ತು ಇರಲ್ಲ.ಯಾಕೆಂದ್ರೆ ಅವರು ನಮ್ಮ ಇಷ್ಟದ ವ್ಯಕ್ತಿ ಆಗಿರುತ್ತಾರಲ್ಲ...
ಅವರಗೆ ಎಷ್ಟೇ ಪ್ರೀತಿ ಇದ್ದರೂ. ಯಾವುದೊ ಕೆಲಸದ ಒತ್ತಡದಿಂದಾಗಿಯೊ ಅಥವಾ ಇನ್ಯಾವುದೇ ಕಾರಣಕ್ಕೊ ನಮ್ಮ ಗಮನಹರಿಸಲು ಸಾದ್ಯವಾಗಿರೋದಿಲ್ಲ...ಅಷ್ಟರೊಳಗೆ ನಮ್ಮ ಮನಸ್ಸು ವಿವೇಚನೆ  ಕಳೆದುಕೊಂಡು ಏನೆನೆಲ್ಲ ವಿಚಾರ ಮಾಡಿಬಿಡುತ್ತೆ.
ಆಮೇಲೆ ಅವರ ಜೊತೆ ಮಾತಾಡಿದಾಗ ಕೋಪ ಕಡಿಮೆ ಆದಾಗ ನಮ್ಮ ಮೇಲೆ ನಮಗೆ ಅಪರಾಧಿ ಭಾವನೆ ಬಂದುಬಿಡುತ್ತದೆ. ನಾವು ಕಾರಣವಿಲ್ಲದೆ ತಪ್ಪುಕಲ್ಪನೆ ಮಾಡಿಕೊಂಡೆವಲ್ಲ ಅಂತ....ಕೋಪ ಕಳೆದು ಮನಸ್ಸು ಶಾಂತವಾಗುತ್ತದೆ...ತಿಳಿನೀರಿನಂತೆ.....ಮುಖದಲ್ಲಿ ಮಂದಹಾಸ ಮೂಡುತ್ತದೆ....😊 😊 😊 


ಗಾಯತ್ರಿ .....
##ಭಾವಾಂತರಂಗದೊಳು##

ಮೂಕ ವೇದನೆ
------------------------
ನೀನು ಎದುರು ಬಂದಾಗ 
ಪ್ರೀತಿ ಮನದಲ್ಲಿ..
ಅರಳಿದಂತೆ ಮೊಗ್ಗು 
ಹೂಬನದಲ್ಲಿ..
ಕಂಗಳು ಸೇರಲು 
ನೋಟವೇ ನುಡಿಯಲು
ಮೂಕವಾದವು ಮಾತುಗಳು.....
..
ನಿನ್ನ ನೋಟದ ಮಿಂಚಿಗೆ
ಅದರ ಮೋಡಿಯ ಸಂಚಿಗೆ,
ನನ್ನೊಲವ ಒರತೆ ಒಡೆದು
ಹರಿಯುತಿದೆ ನಿನ್ನೆಡೆಗೆ.....

ಪುಟಿಯುತಾ ಜಿಗಿಯುತಾ
ನಾದಗೈಯುತಾ 
ಸಾಗುತಿದೆ ಪಯಣ
ಒಲವ ಕಡಲೆಡೆಗೆ.....

ನೀನು ಎನ್ನ ನವಿರಾದ ಭಾವಗಳ 
ಮನೆಯ ಕದವನು ತಟ್ಟಿದೆ....
ನೀನು ಓಲೈಸಲು ನಾನು ಒಲಿದೆ
ಹೃದಯದ ಮಿಡಿತಕೆ ಸ್ಪಂದಿಸಿದೆ.
ಮನದ ಮಂದಿರದಲ್ಲಿಟ್ಟು 
ನಿನ್ನ ಪೂಜೆಸಿದೆ...ನಾ,
ನಿನ್ನನೇ ಆರಾಧಿಸಿದೆ...!!

ಆದರೆ ಅರಿಯದಾದೆ ಈಗ
ನೀನೇಕೆ ಮೌನಿಯದೆ..?
ಒಲವ ಹನಿ ಸುರಿಸದಾದೆ...
ಉತ್ತರವೇ ಇಲ್ಲದ ಪ್ರಶ್ನೆಯಾದೆ...?

ದೂರ ತೀರವಾದೆ ಎನ್ನಯ,
ಭಾವ ತೀರಕೆ ಬಾರದಾದೆ..
ಭಾವನೆಗಳು ಭಾರವಾಗಿದೆ
ನಾ ವಿರಹಿಯಾದೆ....!!

ಹಲವು ವಿದ್ಯಮಾನಗಳಿಗೆ
ಮೂಕ ಸಾಕ್ಷಿಯಾದೆ..!!!..
ಏಕೆ ಹೀಗಾಗಿದೆ ನೀ,
ಏಕೆ ಹೀಗಾದೆ...?

                            -ಗಾಯತ್ರಿ ..
##ಭಾವಾಂತರಂಗದೊಳು##

ಅವ್ಯಕ್ತ ಭಾವನೆ
-------------------------
ಭಾವನೆಗಳನ್ನು ವ್ಯಕ್ತ ಪಡಿಸಬೇಕು..ಪ್ರೀತಿ ಇದ್ದರೆ ಅದನ್ನ ತೋರಿಸಬೇಕು.ಹಾಗಿಲ್ಲದೆ ಪ್ರೀತಿಯನ್ನು ವ್ಯಕ್ತ ಪಡಿಸದೆ ಮನದಲ್ಲೇ ಇಟ್ಟುಕೊಂಡು ಅಷ್ಟು ಪ್ರೀತಿ ಇದೆ ಇಷ್ಟು ಪ್ರೀತಿ ಇದೆ ಅಂದ್ರೆ ಅದು ಗೊತ್ತಾಗೊದಾರೂ ಹೇಗೆ.?ಅಲ್ವಾ...?? ಎಷ್ಟೋ ಬಾರಿ ತಪ್ಪು ಕಲ್ಪನೆಗಳಾಗುವ ಅವಕಾಶವಿರುತ್ತದೆ.
ಎಷ್ಟೋ ಬಾರಿ ರಾಶಿ ಪ್ರೀತಿ ಇದ್ರೂನೂ ವ್ಯಕ್ತಪಡಿಸೊಕೆ ಟೈಮೇ ಇರಲ್ಲ ...
ಆದ್ರೆ ಸಿಕ್ಕಷ್ಟು ಟೈಮಲ್ಲಿ  ,ಅವಕಾಶ ಇದ್ದಾಗ ಅದನ್ನು ವ್ಯಕ್ತ ಪಡಿಸಬಹುದಲ್ಲ....ಹಾಗೂ ಒಂದು ವೇಳೆ  ವ್ಯಕ್ತ ಪಡಿಸಿಲ್ಲ ಅಂದ್ರೆ ನಿಜವಾಗ್ಲೂ ಪ್ರೀತಿ ಇಲ್ಲಾಂತನೇ ಅರ್ಥ....!!!!😱 
ನಂಗೆ ನನ್ನ ಮಕ್ಕಳನ್ನು ಕಂಡ್ರೆ ರಾಶಿ ಪ್ರೀತಿ ಅಂತ ಈಸಿಯಾಗಿ ಹೇಳಿಬಿಡ್ತೀವಿ.ಆದ್ರೆ ನಾವು ನ್ಯಾಯವಾಗಿ ಅಷ್ಟು ಪ್ರೀತೀನಾ ..ಪ್ರೀತಿಯಿಂದ ಒಂದು hug ಆದ್ರೂ ಕೊಡ್ತೀವಾ...??😒 
ಪ್ರೀತಿ ತೊರ್ಸಿದ್ರೆ ಅದು ಅವರಲ್ಲಿ ನಮ್ಮ ಬಗ್ಗೆ ಗೌರವ ಮಮತೆ ಜಾಸ್ತಿಯಾಗುತ್ತದೆ ..ಮತ್ತೆ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ.
.......
ಯಾವುದೇ ಭಾವನೆಯನ್ನಾದರೂ ಅದನ್ನ ವ್ಯಕ್ತ ಪಡಿಸಿದಾಗ ಅದಕ್ಕೆ ಮಹತ್ವ ಜಾಸ್ತಿ..
ನಿಮ್ಮ ಪ್ರೀತಿ ಪಾತ್ರರಿಗೆ ಪ್ರೀತಿಯನ್ನು ನೀಡಿ. ಅದು ಖರ್ಚಾಗಲ್ಲ..ಬದಲಿಗೆ ಇನ್ನು ಜಾಸ್ತಿಯಾಗುತ್ತದೆ...ಇಂಟಿಮೆಸಿ ಜಾಸ್ತಿಯಾಗುತ್ತದೆ...understanding ಜಾಸ್ತಿ ಆಗುತ್ತದೆ...ಭಾವನೆಗಳನ್ನು ತೆರೆದಿಡಿ.ತಪ್ಪು ಕಲ್ಪನೆಗೆ ಅವಕಾಶ ದೂರವಿಡಿ..ಭಾವನೆಗಳ ತೊರೆಗೆ ಕಡಿವಾಣವೇಕೆ?????ಅಲ್ವೇ...😄 😄 😄 😄 


  ....ಗಾಯತ್ರಿ ..
## ಭಾವಾಂತರಂಗದೊಳು##

Priority Matters 
-----—---------------------
ಕೆಲವೊಮ್ಮೆ ಪ್ರೆಂಡ್ಶಿಪ್ ಅನ್ನೋದಕ್ಕೆ ಅರ್ಥನೇ ಇರಲ್ಲ.ವಿಚಿತ್ರ ಅನ್ಸತ್ತೆ.ಒಬ್ಬೊಬ್ಬರು.ನಮ್ಮ ಮುಖ, ಪೊಟೊ ನೋಡಿ ಫ್ರೆಂಡ್ ಮಾಡ್ಕೊಳೊಕೆ ಬರ್ತಾರೆ.ಮುಖ ನೋಡಿ ಮಣೆ ಹಾಕೊದು.!! ಅವರೇ ಮಾತನಾಡಿಸಿ.,ಆಸಕ್ತಿಂದ ನಮ್ಮ ಹೊಗಳಿ ಅಟ್ಟಕೇರಿಸ್ತಾರೆ.ನಮ್ಮ ರೀತಿ ನೀತಿ ಸ್ವಭಾವ ಅರ್ಥ ಮಾಡಿಕೊಳ್ಳದೇ. ನಮ್ಮನ್ನ ಕಂಡ್ರೆ ಅಷ್ಟು ಇಷ್ಟ ಅನ್ನೊ ರೀತಿ ವರ್ತಿಸುತ್ತಾರೆ...ಆಮೇಲೆ ಏನಾಗುತ್ತೊ.. ನಾವು ಅವರ ನೇಚರ್ ನಮಗಿಷ್ಟವಾಗಿ ನಿಧಾನವಾಗಿ ಅವರನ್ನ ಅರ್ಥ ಮಾಡಿಕೊಂಡು..ಅವರ ಮನಸ್ಸಿಗೆ ಹತ್ತಿರವಾದ್ವಿ ,ನಮಗೆ ಇಷ್ಟವಾದರು  ಅನ್ನೊಷ್ಟೊತ್ತಿಗೆ....ಅವರು ನಮ್ಮನ್ನ ಅವಾಯ್ಡ ಮಾಡೋಕೆ ನೊಡ್ತಾರೆ...ಮೊದಲಾಡಿದ ಮಾತುಗಳು.ಕರೆಗಳು. ಮೆಸೇಜ್ ಗಳು..ಎಲ್ಲಾ ಸುಳ್ಳೇನೊ ಅನ್ನಿಸುತ್ತೆ..ಅಷ್ಟು ಬೇಗ ನಾವು ಬೇಡವಾಗಿ ಬಿಡುತ್ತೆವಾ?  ಅಷ್ಟು ಬೇಗ ನಮಗಿದ್ದ ಪ್ರಯೊರಿಟಿ ಕಡಿಮೆ ಆಗಿಬಿಡುತ್ತಾ..ಹಾಗಿದ್ದರೆ   .ನಿನ್ನ ಸ್ನೆಹ ಬೇಡ ಅಂತ.ನೇರವಾಗಿಹೇಳಬಹುದಲ್ಲ.
ಏಕ್ ಮಾರ್ ದೊ ತುಕುಡಾ.ಕಥಂ.😜 .
ಸ್ನೇಹ ಮಾಡಿಕೊಳ್ಳೊವಾಗ ಇರುವ ತುಡಿತ, ಸ್ನೇಹಿತರಾದ ಮೇಲೆ ಇರಲ್ವೇನೊ??!!" ಯಾವುದರ ಆದಾರದ ಮೇಲೆ ಅವರ ಸ್ನೇಹ ಅನ್ನೋದೇ ಅರ್ಥನೇ ಆಗಲ್ಲಪ್ಪಾ...ಬೇಕಿತ್ತಾ.ಇದೆಲ್ಲಾ..ಇದರಿಂದ ಏನು ಸಾಬೀತು ಆಗುತ್ತೆ?...ಚಂಚಲ ಮನಸ್ಸು ಅಂತನಾ?ಅಥವಾ 
ಪ್ರಯೊರಿಟಿನಾ?????...ನಿಮ್ಗೂ ಅನ್ಸತ್ತಾ...ಅಥವಾ ನನಗೊಂದೆ ಹೀಗೆ ಅನ್ಸಿದೆಯಾ..😁 
Always Priority Matters 😒! !!!

ಗಾಯತ್ರಿ ...

##ಭಾವಾಂತರಂಗದೊಳು.##

       ಭ್ರಮೆ
--------------------
ಕಾರ್ಮೋಡ ಕವಿದಿದೆ
ಕತ್ತಲೆಯು ಆವರಿಸಿದೆ
ಅಂತರಾಳಕೆ ಭ್ರಮೆಯ
ಮುಸುಕು ಮುಚ್ಚಿದೆ..
ಮನಸು ಬೇಸತ್ತಿದೆ...

ತೊಳಲಾಟಕೆ ಕೊನೆಯಲ್ಲಿ
ನಿಟ್ಟುಸಿರಿಗೆ ಸಾಂತ್ವನವೆಲ್ಲಿ
ಆಸೆಗೆ ಕಡಿವಾಣವೆಲ್ಲಿ
ದಾರಿ ತಪ್ಪಿದೆ ಎಲ್ಲಿ....?

ದೂರದಲ್ಲೊಂದು
ಭರವಸೆಯ ಬೆಳಕು
ಮನದಲ್ಲೊಂದು 
ಸಣ್ಣ ಛಳಕು

ಸರಿಯದ ಹೃದಯದ ಅಳುಕು
ಬಲವಾಗಿದೆ ಭ್ರಮೆಯ ಥಳಕು

ಭ್ರಮೆಯು ಸರಿದು.
.ಇರುಳು  ಕಳೆದು..
ಮೋಡ ಹನಿದು..
ಮಳೆಯ ಗರೆದು..
ಹೊಸ ಭರವಸೆಯು
ಮೊಳಕೆಯೊಡೆವುದೆಂದೋ..!"
ಮನದ ಆಗಸ ತಿಳಿಯಾಗಿ
ನವ ಹೊಂಗಿರಣ ಎಂದು ಮೂಡುವುದೋ...?
ಸಂತಸದ ಹಸಿರು ನಳನಳಿಸುವುದೆಂದೋ...!!!!!

ಗಾಯತ್ರಿ ..

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...