Wednesday 13 December 2017

#ಭಾವಾಂತರಂಗದೊಳು#

ಬೆಣ್ಣೆ ಕೃಷ್ಣ

,
ಕಳ್ಳ ನೀನಲ್ಲ..
ಬೆಣ್ಣೆ ಕದ್ದರೂ ನಿನ್ನ
ಹಾಡಿ ಕೊಂಡಾಡುವರೆಲ್ಲ..
ಅನುದಿನವೂ ನಿನ್ನ ನೆನೆದು
ಪಾಮರಾಗುವರೆಲ್ಲ...

ಬಾಲ ಗೊಪಾಲ ನೀನು
ಸೃಷ್ಟಿಯ ಲೀಲೆ ನೀನು
ದುಷ್ಟ ಶಿಕ್ಷಕ ನೀನು ,ಶಿಷ್ಟ ರಕ್ಷಕನು
ದೇವಕೀ ನಂದನನು ನೀನು..

ಗೋಪಿಕೆಯರ ಕಣ್ಮಣಿ ಗೊಪಾಲನು ನೀ.
ರಕ್ಕಸರ ಮನಗೆದ್ದ ಮೋಹಿನಿಯು ನೀನು..
ನಿನಗಾರುಂಟು ಸರಿಸಮಾನರು ಜಗದಿ,
ಮೂರ್ಜಗವೇ ನಿನ್ನೊಳಗೆ ಅಧೀನವು...

ಶೇಷ ಶಯನನು ನೀನು
ಬಡ ಸುಧಾಮನ ಗೆಳೆಯ,
ನೀನೇ ಜಗದೊಡೆಯ, ನಾವೆಲ್ಲ 
ಮತಿಹೀನರು..
ನಿನ್ನ ದಯೆಯೊಂದಿದ್ದರೆ 
ಜಗದೊಳಗೆಲ್ಲ ಪಾವನರು...!!!!"


ಗಾಯತ್ರಿ ...

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...