Monday, 18 December 2017

##ಭಾವಾಂತರಂಗದೊಳು##

ಹಂಬಲ
--------------

ನೀನು ಬಾನ ಶಶಿ..
ನಾನು ಭುವಿಯ ನೈದಿಲೆ
ಮೌನ ಸಂಭಾಷಣೆಯು 
ನಡೆದಿಹುದು ನಮ್ಮಲೆ
ಬರಬಾರದೇ ನೀನು 
ಭುವಿಗಿಳಿದು ಒಮ್ಮೆಲೆ
ಕಾದಿರುವೆ ನಿನಗಾಗಿ,
ಸುರಿಸಬಾರದೇ 
ಒಲುಮೆಯ ಮಳೆ..

ನನ್ನ ನಿನ್ನಯ ನಡುವೆ 
ಈ ದೂರ ಸಲ್ಲ..
ನಿಜವ ನುಡಿಯುವೆ ನಾನು,
ನಿನ್ನೊಲವೆ ನನಗೆಲ್ಲ...
ನೀ ಬರುವ ದಾರಿಯಲಿ ನಗೆಯ ಪರಿಮಳವ ಚೆಲ್ಲುವೆನಲ್ಲ
ಬರಬಾರದೇ ನನ್ನೆಡೆಗೆ 
ಮೆಲ್ಲ ಮೆಲ್ಲ...

ನಿನ್ನೊಲವ ಮಳೆಯಲಿ ಮಿಂದು
ಕರಗುವ ಆಸೆ ನನಗಿಂದು..
ಕ್ಷಣ ಕ್ಷಣವೂ ಏತಕೋ ಭಾರವಾಗಿಹುದು..
ಬಾಡಿದೆ ಮನವಿಂದು
ಕಾದು..ಕಾದು....
ಕ್ಷಣ ಕ್ಷಣವ ನಿರೀಕ್ಷೆ ಯಲಿ 
ತೇದು ತೇದು.....

ನೀನೋಡಿ ಬಂದು ಬಿಡು
ತಂಪಾದ ಹಾಲ್ನೊರೆಯ 
ಹಿತವಾಗಿ ಸುರಿಸಿಬಿಡು
ಬೆಳದಿಂಗಳ ಹನಿಯಲ್ಲಿ ಎನ್ನ ತೋಯಿಸಿಬಿಡು
ನಾನಾಗಿ ನಿನೇ 
ನನ್ನಲ್ಲಿ ಒಂದಾಗಿಬಿಡು...!!..

                        *ಗಾಯತ್ರಿ ..

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...