Monday 12 March 2018

#ಭಾವಗಳ ತೇರು #

ಭಾವಗಳ ತೇರಿಂದು 
ಶೃಂಗಾರಗೊಂಡಿತ್ತು,
ಬಣ್ಣಬಣ್ಣದ ಕನಸುಗಳು 
ನನಸ ನಗರಿಯಲ್ಲಿ..

ಪಟಪಟ ಹಾರಾಡುತ್ತಿದ್ದವು 
ಸಂಭ್ರಮದ ಪತಾಕೆಗಳು,
ಹಾದಿಯುದ್ದಕ್ಕೂ ಒಲವಿನ
ಹೂಗಳ ರಾಶಿಯೇ ಚೆಲ್ಲಿ...

ಸುತ್ತಲೂ ನಗು ,ಕೇಕೇಗಳ ಕಲರವರಂಗೇರಿತ್ತು...
ಅಲ್ಲಲ್ಲಿ ಬಿಳಿಮೊಡಗಳ ದಂಡು
ನಿಂತು ನೋಡುತ್ತಿತ್ತು..

ಆ ವೈಭವದ ,ಸಂತಸದ ಪರಿಯಗಳನು ಏನೆಂಬೆ,
ಶಬ್ದಗಳಿಗೆ ನಿಲುಕದಷ್ಟು...
ಕಣ್ತುಂಬಿಕೊಂಡಷ್ಟು  ಕಣ್ಣೆವೆಗಳು ದಣಿಯದಷ್ಟು ...


.......ಗಾಯತ್ರಿ....
#ಭಾವಾಂತರಂಗದೊಳು##

ಮೌನದಲಿ ಗುನುಗುತ್ತಿದೆ 
  ನನ್ನುಸಿರ  ಕೊರಳೊಂದು
ಕ್ಷಣ ಕ್ಷಣವೂ ಹನಿಯುತ್ತಿದೆ
ಒಲವ ಧಾರೆಯೊಂದು...

ಅತಿಯಾಸೆ ಎನಿಲ್ಲ
ತುಸು ಪ್ರೀತಿ ಸಾಕಲ್ಲ
ಜೊತೆಯಾಗಿ ನೀ ಬಂದು
ಇನಿತೊಂದು ಖುಷಿ ನೀಡು
ಮನವಿಂದು ಮುದಗೊಂಡು
ಬರೆದೊಂದು ಹೊಸ ಭಾಷ್ಯ ಬದುಕಿಗೊಂದು

ನೀನಿರದೆ ಬದುಕಿಲ್ಲವೆಂದಲ್ಲ
ಭಾವನೆಗಳು ನಿರ್ಜೀವವಾದಂತೆ
ಮೌನವೂ ಸ್ಥಬ್ದವಾದಂತೆ
ಮಾತಲ್ಲಿ ರಸವಿರದಂತೆ
ಜೀವಕೆ ಅರ್ಥವಿರದೆ 
ಬದುಕಬೇಕಲ್ಲ ಅಂತಷ್ಟೇ....

ನೀನೆನಗೆ ಬೇಕು 
ನೀನೇ ಬೇಕು
ನೀನು ನನಗಾಗಿ ಬೇಕು
ನೀನು ನಾನಾಗಿ ಬೇಕು
ಅಷ್ಟೇ......ಸಾಕು
ಇಷ್ಟಿದ್ದರೆ ಇನ್ನೇನು ಬೇಕು.....


....ಗಾಯತ್ರಿ...

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...