Monday, 18 December 2017

##ಭಾವಾಂತರಂಗದೊಳು##

Soul Mate
-----------------------
ಕುದಿಯುತಿರೆ ಮನದಿ
ಹೇಳಲಾಗದ
ವಿಷಯ..
ತೊಳಲಾಟ 
ಹೃದಯದೊಳಿರೆ
ಭಾವಗಳೆಲ್ಲ
ವಿಷಮಯ..

ತಡೆಹಿಡಿಯಲಸಾಧ್ಯವು
ಸಹಿಸಲಾಗದು ನೋವು...
ಬದುಕು ನೀರಸವು..

ಹೇಳಲು ಬೇಕಾಗಿದೆ 
ಆತ್ಮೀಯ ಸ್ನೇಹವು..
ಸಿಕ್ಕರೆ ಆ ಸಂಗತವು
ಜೀವ, ಜೀವನಕ್ಕೆ ಹಿತವು..!!

ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ ಯಾವುದಾದರೂ ಒಂದು ತೀರಾ ವಯಕ್ತಿಕ ವಿಷಯ ಸಿಕ್ಕಾಕೊಂಡ್ಬಿಟ್ಟಿರುತ್ತದೆ.ಅದನ್ನ ಬೇರೆವರತ್ರ ಹೇಳೊಕು ಆಗಲ್ಲ ಹೇಳ್ದೆ ಇರೊಕೂ ಆಗಲ್ಲ.ಒಂದು ವೇಳೆ ಹೇಳಿದ್ರೆ ತಪ್ಪುತಿಳೊಂಡು ಬಿಡ್ತಾರೇನೊ ನಮ್ಮನ್ನ ಅನಿಸುತ್ತೆ.ಹೇಳಿದ್ರೂ ಯಾರ ಹತ್ರ ಹೇಳೋದು ಅನ್ನೋದು ಸಮಸ್ಯೆ ಆಗುತ್ತೆ.
ನಿಮ್ಮ ಜೀವನದಲ್ಲಿ ನಂಬಿಕೆಯಿಂದ, ವಿಶ್ವಾಸದಿಂದ ಯಾವದೇ ಬೇಸರವಿಲ್ಲದೆ, ನಿಮ್ಮ ಮನಸ್ಸಿಗೆ,ನಿಮ್ಮ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿರಬೇಕು.ಅವರ ಎನೇ ಹೇಳಿಕೊಂಡರೂ ನಿಮಗೆ ಆತ್ಮ ಸಂತೊಷ ಸಿಗುಂತಿರಬೇಕು.ಆದ್ರೆ ಅಂತಹ soul mate ಸಿಗೋದು ತುಂಬಾ ಕಷ್ಟ.ಸಿಕ್ಕರೆ.ಅದೃಷ್ಟ.
ನಮ್ಮ ಬೇಸರ ದುಃಖ,ಸುಖ ಸಂತೋಷ ಎಲ್ಲವನ್ನೂ ಹೇಳಿಕೊಂಡರೆ ನಮ್ಮ ಮನಸ್ಸು ಯಾವಾಗ್ಲೂ ಉಲ್ಲಾಸದಿಂದಿರುತ್ತದೆ.
ಅಂತಹ soul mate ಇಲ್ಲದಿದ್ದರೆ, ,ಭಾವನೆಯನ್ನು ಒಳಗೊಳಗೇ ನುಂಗಿ, ಕೆಲವೊಮ್ಮೆ ಕಣ್ಣೀರಿನ ರೂಪದಲ್ಲಿ ಹರಿಯುತ್ತಿರುತ್ತದೆ....

ಇದನ್ನು ಬರೆಯುವಾಗ ನನಗೆ ನೆನಪಾಗಿದ್ದು ಕೆ ಎಸ್ ನಿಸಾರ್ ಅಹಮದ್ ಅವರ ಭಾವಗೀತೆ "ಬೇಸರಾಗಿದೆ ಮಾತು
ಭಾರವಾಗಿದೆ ಮೌನ
ನೋವುಕರಗಿದೆ ಕಣ್ಣಲಿ...

ಅಡಿಗೆ ಚುಚ್ಚಿದ ಮುಳ್ಳು
ಒಳಗಡೆಯೇ ಮುರಿದಂತೆ
ಭಾವ ಕಟುಕಿದೆ ಮನದಲಿ.....!!!


ಗಾಯತ್ರಿ

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...