Wednesday, 13 December 2017

##
ಭಾವಾಂತರಂಗದೊಳು#

ಕಣ್ಮಣಿ

ಆ ನಿನ್ನ ನಗು
ಮನದಲ್ಲಿ ಪುಳಕದ ಬೆಳಗು
ಆ ನಿನ್ನ ಕೆನ್ನೆ
ನನ್ನೊಲವಿನ ಚಿನ್ಹೆ

ನಿನ್ನ ಮುಗ್ಧತೆ|
ಮನಸೂರೆಗೊಂಡಿದೆ ||
ನಿನ್ನ ಮಾತು ಅಕ್ಕರೆ|
ಸವಿದಂತೆ ಸಿಹಿ ಸಕ್ಕರೆ ||

ಆ ನಿನ್ನ ಪುಟ್ಟ ಹೆಜ್ಜೆ|
ಸದ್ದು ಮಾಡಿದೆ ಹೃದಯದ ಗೆಜ್ಜೆ||
ನೀ ನನ್ನ ಅರಗಿಣಿ |
ನಮ್ಮೊಲವಿನ ಚಿನ್ನದ ಗಣಿ||

ಮರೆಯಲಾಗದ ಸವಿ ನೆನಪು|
ಆಹಾ..!!
ಮುದ್ದಾದ ರಂಗಿನ ಕದಪು||
ನೀ ಬಂದೆ ಈ ನನ್ನ ಸವಿ ಬಾಳಿಗೆ |
ಬದುಕಾಯಿತು ತಿಂದಂತೆ ಸಿಹಿ ಹೋಳಿಗೆ .||


ಗಾಯತ್ರಿ

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...