Wednesday, 13 December 2017

#ಭಾವಾಂತರಂಗದೊಳು##

ಅಣ್ಣತಂಗಿ

ಅಣ್ಣ ನೀನೆ ಎನಗೆ ಎರಡು|
ಕಣ್ಣುಗಳಂತೆ||
ಬಣ್ಣಬಣ್ಣದ ಬದುಕಲಿ ನಗುವ| ಚಿತ್ತಾರದಂತೆ.||

ಒಡನಾಡಿ ನೀನಿರಲು|
ಒಡಗೂಡಿ ನಾ ಬರುವೆ..||
ನೀನೆನಗೆ ಬದುಕಲ್ಲಿ|ನೆ-
ಮ್ಮದಿಯ ಗೂಡಾಗಿರುವೆ.||

ಹರಸಿ ಹಾರೈಸಿರುವೆ.|
ಮೆರೆಸಿ ಮೇಲೈಸಿರುವೆ.||
ಆಧರಿಸಿ ನಿನ್ನೊಲುಮೆಯ|
ಜೊತೆಗೂಡಿ ನಡೆವೆ..

ನೀನಿತ್ತ ಈಗೊಂಬೆ
ಎನ್ನ ಕಂಗಳ ರಂಭೆ
ನೀ ಕೊಟ್ಟ ಸಿಹಿಮುತ್ತು
ಹೃದಯ ತುಂಬಿದ ಪ್ರೀತಿಯತುತ್ತು

ಹೀಗೇ ಇರಲಿ ನಂದನ
ನಮ್ಮೊಲವಿನ ಬಂಧನ..


,ಗಾಯತ್ರಿ....

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...