Wednesday, 13 December 2017

##ಭಾವಾಂತರಂಗದೊಳು##

ಗುರು

ಆಸರೆಯು ನೀನೆನಗೆ|
ಬೇಸರವ ತೋರದಿರು||
ದೂರದಾ ದಾರಿಯಿದು|
ತೀರದ ದಾಹವೆನಗೆ....

ಸಾಧಿಸುವ ಛಲವಿದೆ|
ಭೇದಿಸಲು ಹಲವಿದೆ||
ವಿದ್ಯೆಯು ಬೇಕೆನಗೆ|
ಹರಸಿ ನೀಡೆನಗೆ....

ಗುರಿಯನು ತಲುಪಿಸುವಾ|
ಗಾರುಡಿಗನು ನೀನೆನಗೆ||
ಎನ್ನ ತಪ್ಪನುತಿದ್ದಿ ,|
ಹೇಳುತಲಿ ಬುದ್ದಿ,|
ಕೈಹಿಡಿದು ನಡೆಸು ನೀ ಕೊನೆಯವರೆಗೆ....!!"""

ಗಾಯತ್ರಿ

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...