Wednesday, 13 December 2017

#ಭಾವಾಂತರಂಗದೊಳು#

ಅಣ್ಣ ನೀನೆನಗೆ|
ಎರಡು ಕಣ್ಣುಗಳಂತೆ||
ಬಣ್ಣಬಣ್ಣದ ಬದುಕಲಿ |
ನಗುವ ಚಿತ್ತಾರದಂತೆ.||

ನೀಕೊಟ್ಟ ಈ ಗೊಂಬೆ|
ಎನ್ನ ಕಂಗಳ ರಂಭೆ||
ನಿನಿತ್ತ ಸಿಹಿಮುತ್ತು|
ಹೃದಯತುಂಬಿದ ಪ್ರೀತಿಯ ತುತ್ತು||


ಒಡನಾಡಿ ನೀನಿರಲು|
ಒಡಗೂಡಿ ನಾ ಬರುವೆ..||
ನೀನೆನಗೆ ಬದುಕಲ್ಲಿ|
ನೆಮ್ಮದಿಯ ಗೂಡಾಗಿರುವೆ.||

ಹರಸಿ ಹಾರೈಸಿರುವೆ.|
ಮೆರೆಸಿ ಮೇಲೈಸಿರುವೆ.||
ಆಧರಿಸಿ ನಿನ್ನೊಲುಮೆಯ|
ಜೊತೆಗೂಡಿ ನಡೆವೆ..

ಹೀಗೇ ಇರಲಿ ನಂದನ|
ನಮ್ಮೊಲವಿನ ಬಂಧನ..||


,ಗಾಯತ್ರಿ....

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...