Wednesday, 13 December 2017


ಬೆಳದಿಂಗಳ ಇರುಳು...
-------------------------------
ಬೆಳದಿಂಗಳ ಸುಮಧುರ ಇರುಳು
ಗುನುಗುತ್ತಿದೆ ನನ್ನೊಲವ ಕೊರಳು
ಬೀಸುತ್ತಿದೆ ಹಿತವಾದ ತಂಗಾಳಿ
ಕಚಗುಳಿಯಿಡುತ್ತವೆ ಮುಂಗುರುಳು

ಕಾಡುತಿದೆ ಮನದಲಿ ಯಾವುದೊ ರಾಗ
ಅರಿವಿಗೆ ಬಾರದ ಅನುರಾಗ..
ಮನಮೋಹಕ. ಚಂದಿರನ ಅಂದ
ತೊರೆಯಲಾರದ ಅನುಬಂಧ..
.
ಸಾಲು ಮರಗಳ ನೆರಳಲ್ಲಿ
ನಿನ್ನ ಕೈಹಿಡಿದು ನಡೆಯುವಾಸೆ ಮನದಲ್ಲಿ
ಅಂತರಾಳದಲಿ ಮಿಡಿವ ಮಾತುಗಳ
ನುಡಿಯುವಾಸೆ ಸಂಗಾತಿ ನಿನ್ನಲ್ಲಿ.....
ಆಹಾ ....
ಎಂಥ ಆಹ್ಲಾದಕರ ಈ ನೋಟ
ಬಹು ಮನೋಹರ ವಸುಂಧರೆಯ
ಮೈ ಮಾಟ......

ಗಾಯತ್ರಿ.

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...