Wednesday, 13 December 2017

##ಭಾವಾಂತರಂಗದೊಳು##

ಮನೊಹರಿ
-------------------
ಮತ್ತೆ ಬರಬಾರದೇಕೆ |
ಮನಸೆಳೆದಿದ್ದ ಮನೋಹರಿ||
ನೋಡಿದಾಗಲೇ ನಿರ್ಧರಿಸಿದ್ದೆ |
ಈ ಹೃದಯ ನಿನಗೇ ಖಾತರಿ||

ನೂರು ಜನ್ಮದ ಪ್ರೀತಿ 
ನೀಡುವೆ ನಾನು|
ನೀನಿಲ್ಲದ ಬದುಕು 
ರವಿಯಿಲ್ಲದ ಬಾನು|
ಕಾಣುತಿದೆ ಕತ್ತಲಲೂ
ನಿನ್ನದೇ ಪ್ರತಿರೂಪ
ಪ್ರೀತಿ ನಿರೀಕ್ಷಕನಿಗೆ
ನಿನ್ನಿಂದ ಪರಿತಾಪ||

ನೂರಾರು ಕನಸುಗಳು
ಮನಸ ನಗರಿಯಲ್ಲಿ|
ಅರಸ ಹೊರಟಿವೆ 
ಬದುಕ ಮೆರವಣಿಗೆಯಲ್ಲಿ|
ಉಸಿರಾಡುವೆ ನಾನು 
ನಿನ್ನದೇ ನೆನಪಲ್ಲಿ|
ಜೊತೆಯಾಗು ನೀ ಎನ್ನ ಬದುಕಲ್ಲಿ...||

ಗಾಯತ್ರಿ ...

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...