Wednesday, 13 December 2017

##ಭಾವಾಂತರಂಗದೊಳು..##

ಶೀತ ಕಾವ್ಯ
---------------
ತಲೆಯೇ ಓಡುತ್ತಿಲ್ಲ
ಮುಂದೆ ಏತಕೊ.?||
ನೆನಪುಗಳೆಲ್ಲ ಬಂಧಿಯಾಗಿವೆ|
ಇಲ್ಲಿ ಯಾಕೋ?

ಕಡಿವಾಣ ಹಾಕಿವೆ..|
ಭಾವನೆಗಳ ತೊರೆಗೆ...|
ಕಂಗಳು ಮಂಜಾಗಿದೆ|
ಶೀತದ ಕಣ್ಣೀರಿಗೆ....|

ಜ್ವರದ ತಾಪವೊ
ವಿರಹದ ಪ್ರತಾಪವೊ
ತಿಳಿಯದ ಕನವರಿಕೆ...|
ಬೆಚ್ಚಗೆ ಹೊದ್ದು..ಮುಚ್ಚಿ|
ಮಲಗುವಾ ಬಯಕೆ....

ಕಣ್ಣೆಲ್ಲ ಕೆಂಪಾಗಿ
ಮೂಗೆಲ್ಲ ಸೋರಿಕೆ..
ನೆನಪು ಮನಸುಗಳಿಗೊಂದು
ಸಣ್ಣ ಕೋರಿಕೆ.....

ಹೀಗಾದರೆ ಹೇಗೆ
ನೀಡದಿರಿ ತೊಂದರೆ ನನಗೆ..
ತಾಳಲಾರೆ ಜ್ವರದ ಬೇಗೆ..
ರೊಸಿದೆ ಮನಸು ..
.ಬರೆಯಲಾರದೆ ತಡಕಾಡಿದೆ 
ಕೈಗಳು ಅಕ್ಷರಗಳಿಗೆ...!!!!!!😒 😒 😒 

ಗಾಯತ್ರಿ....

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...