Wednesday, 13 December 2017

#ಭಾವಾಂತರಂಗದೊಳು#

ಎಷ್ಟೊಂದು ಸುಂದರ ವಾದ ಕನಸುಗಳು|
ಬಾಳ ಬುತ್ತಿಯ ಸಿಹಿಯಾದ ತುತ್ತುಗಳಂತೆ||
ಎಷ್ಟೆಲ್ಲ ಮಧುರವಾದ ನೆನಪುಗಳು|
ಹುಣ್ಣಿಮೆಯ ಇರುಳಿನಾ ಬೆಳದಿಂಗಳಂತೆ..!||

ಯಾವುದೊ ಅಸ್ಪಷ್ಟವಾದ ಹುಡುಕಾಟ|
ಮನದೊಳಗ ಹಲವಾರು ಗೊಂದಲಗಳ ಕಾಟ..||
ನೆಮ್ಮದಿಯ ಬಳ್ಳಿಗಾಗಿ ಅಲೆದಾಟ|
ನಿಟ್ಟುಸಿರುಗಳ ಒಡನೆ ಸತತಹೋರಾಟ||

ಕನಸುಗಳು ಹೆಣೆದಿವೆ ಮೌನದಲ್ಲಿ|
ಜೊತೆ ನೀಡುವವು ಎನಗೆ ಏಕಾಂತದಲ್ಲಿ||
ಮುದ ತರುವುದು ಅದು ಎನಗೆ, ಹೃದಯಕ್ಕೆ|
ನನಸಾಗವು ಬಲು ದೂರ ವಾಸ್ತವಕೆ..||

ಕನಸಿಲ್ಲದ ಮನಸಿಲ್ಲ|
ನೆನಪಿಲ್ಲದ ಬಾಳಿಲ್ಲ||
ಕನಸು ನೆನಪುಗಳೆರಡೂ
ಬೆಸೆದುಕೊಂಡಿವೆ|
ಈ ಬಾಳೆಂಬ ಸಂಪುಟಕೆ..||
ಚಿತ್ತಾರ ಬರೆದಿವೆ ಬದುಕಿನ ಭಾವಪಟಕೆ.!!!!||

-
ಗಾಯತ್ರಿ

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...