Wednesday, 13 December 2017

##ಭಾವಾಂತರಂಗದೊಳು##

ಸಹೋದರತ್ವ
*************
ಅಣ್ಣತಂಗಿಯರ ಈ ಬಂಧ
ಸವಿದಷ್ಟೂ ಸವೆಯದ ಅನುಬಂಧ
ಅಣ್ಣನು ಇತ್ತ ಶ್ರೀರಕ್ಷೆ..
ತಂಗಿಗೆ ಅದುವೆ ಒಲವಿನ ಭಿಕ್ಷೆ...

ಅಕ್ಕನೊಲುಮೆಯ ತಮ್ಮ
ಅವಳೇ ಅವನಿಗೆ ಎರಡನೆ ಅಮ್ಮ
ಮಮತೆಯ ಧಾರೆ ಹರಿಸಿಹಳು..
ಪ್ರೀತಿಯ ತುತ್ತು ಬಡಿಸಿಹಳು...

ಅಮ್ಮನ ಒಲುಮೆಯ ಕುಡಿಗಳು ಇವರು
ನಲಿವಿಗೆ ಕಾರಣ ವನಿತೆಗೆ  ತವರು..
ಇವರೊಲುಮೆ ಎಂದೂ ಇರಲಿ ಹೀಗೆ
ಕೊನೆಯಾಗದಿರಲಿ ಎಂದೆಂದೂ,
ಸಹೊದರತ್ವದ ಬೆಸುಗೆ....|||||


ಗಾಯತ್ರಿ...

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...