Wednesday, 13 December 2017

##ಭಾವಾಂತರಂಗದೊಳು.###

..ಮುಂಜಾವು....
,-----------------------
ಚುಮು ಚುಮು ಚಳಿಯಿದೆ|
ಮನದಲಿ ನಿನ್ನ ನೆನಪ ಬಿಸಿಯಿದೆ||
ಮುಂಜಾನೆಯ ಮಂಜಿನ ಹನಿ|
ಮುಟ್ಟಿದರೆ ಮುನಿ..||

ಎಷ್ಟು ಹಿತವು ಸ್ಪರ್ಷಿಸಿದರೆ|
ಎಂತಹ ಮುದವು ವೀಕ್ಷಿಸಿದರೆ..||
ಬನದಲ್ಲಿ ಹರಡಿದೆ ಒಲವ ಕಂಪು|
ಮನಸೂರೆಗೊಂಡಿದೆ ಸೃಷ್ಟಿಯ ಸೊಂಪು ||

ಹನಿಹನಿಯಲ್ಲೂ ಸುಂದರ ಹೊಳಪು|
ಕಂಡಂತೆ ಆ ನಿನ್ನ ಕಣ್ಣ ಬೆಳಕು..||
ದುಂಬಿಗಳ ಝೇಂಕಾರ, ಕಿವಿಗಳಿಗೆ| ನಾದವಾಗಿದೆ ಓಂಕಾರ ||

ಹಕ್ಕಿಗಳ ಚಿಲಿಪಿಲಿ ಕಲರವ|
ನಿನ್ನ ಕಿಲ ಕಿಲ ನಗುವಿನಂತಿದೆ...||
ಹೊಂಬಣ್ಣದ ಚಿಗುರುಗಳೆಲ್ಲ |
ನಿನ್ನ ಕದಪುಗಳ ಕೆಂಪಿನಂತಿದೆ...||

ಎಳೆಯ ಬಿಸಿಲಿನ ಸ್ಪರ್ಷಕೆ|
ಬಣಬಣ್ಣದ ಹೂವು ಹರ್ಷಕೆ||
ಅರಳಿವೆ ಒಲವ ಬಳ್ಳಿಯಲಿ|
ಮಧುರ ಭಾವವು ಮನದಲಿ||

ಮನಸು ಅರಳಿತು,
ಮಾತುಗಳು ಮೌನವಾಗಿವೆ..
ಕಂಗಳು ಮಾತನಾಡಿವೆ....||..
ಮೂಕ ಸ್ವರಗಳ ಭಾವ ಬೆಳಕಲಿ|
ನೆನಪ ಹೆಜ್ಜೆಗಳು ಸಾಗಿವೆ...!!!


ಗಾಯತ್ರಿ

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...