Wednesday, 13 December 2017

...##ಭಾವಾಂತರಂಗದೊಳು..##

.ಹೇಳದೆ ಬಂದ ಮಳೆ....
*--------+------------------*
ನೀ ಬಂದೆ ನನ್ನೊಳಗೆ..
ಹೇಳದೇ ಬಂದ ಮಳೆಯ ಹಾಗೆ
ತಂಪನೆಯ ಗಾಳಿ ಬೀಸಿ
ಹನಿ ಹನಿ ಮಳೆ ಸುರಿಸಿ.
ಇಳೆಯ ಮನವ ತಣಿಸಿ.
ಪ್ರೀತಿಯನು ಉಣಿಸಿ,

ಮೈಮರೆತಿರುವಾಗ,
ಸವಿನೆನಪಲ್ಲಿ,
ಕಳೆದು ಹೋಗಿರುವಾಗ
ಸವಿಗನಸಲ್ಲಿ,

ಒಮ್ಮೆಲೆ ಬರಗಾಲದ 
ಛಾಯೆಯು ಮೂಡಿ...!
ಆ ಛಾಯೆಗೆ ಮನದಲಿ
ಆತಂಕವು ಮೂಡಿ..!

ಕಾದಿಹಳು ಆತುರದಿ
ಪ್ರೀತಿಯ ಹನಿ ಹನಿಗೆ...
ಬಾಯಾರಿದ ಭೂರಮೆಯು
ಕಾದಂತೆ ಮಳೆ ಹನಿಗೆ...

ಕಾರಣ ಚಿಕ್ಕದಾದರೂ 
ಮುನಿಸಿಕೊಂಡ ಮಳೆರಾಯ,
ಪ್ರೀತಿಯ ಮೋಡ ತುಂಬಿದ್ದರೂ 
ಸುರಿಸಲು ಮಳೆ ಹನಿಯ...

ಸಹಿಸಲಾದು ಈ ಮೌನ..
ದೂರ ತೀರ ಯಾನ..
ತಪ್ಪು...
ಅರಿಯದೆ ಮಾಡಿದ,
ಭೂರಮೆಯದಾ, ?o
ಅರಿತೂ ಚಿಕ್ಕ ಕಾರಣಕ್ಕೆ 
ಮುನಿದ ಆ ಮೇಘದಾ?
ಯಾರದು ಪ್ರಮಾದ?..

ಗಾಯತ್ರಿ...

No comments:

Post a Comment

#ಭಾವಗಳ ತೇರು # ಭಾವಗಳ ತೇರಿಂದು  ಶೃಂಗಾರಗೊಂಡಿತ್ತು, ಬಣ್ಣಬಣ್ಣದ ಕನಸುಗಳು  ನನಸ ನಗರಿಯಲ್ಲಿ.. ಪಟಪಟ ಹಾರಾಡುತ್ತಿದ್ದವು  ಸಂಭ್ರಮದ ಪತಾಕೆಗಳು, ಹಾದಿಯುದ್ದಕ್ಕೂ ಒಲವಿ...