##ಭಾವಾಂತರಂಗದೊಳು###
"
,"""ಒಲವ ಮಳೆಯ ಪಯಣ,"""
----------------------------------+
ನಲ್ಲನೊಲುಮೆಯ ನಲ್ಲೆ,
ನಿಲ್ಲಬಾರದೇಕೆ ..
ನನ್ನೊಳು ನಿನಗೆ
ಹುಸಿ ಮುನಿಸೇಕೆ ?...
ನೀನಿರದ ಬಾಳು,ಮಳೆ |
ಬಾರದ ಇಳೆಯಂತೆ..||
ನೀನೆ ಎನಗೆ ಇನ್ನು,|
ಬಾಳ ಜೊತೆಯಂತೆ...||
ಹನಿ ಹನಿಯಲ್ಲೂ ನಿನ್ನ ದನಿಕೇಳಿದಂತೆ..!|.
ಆ ನೀರ ಸ್ಷರ್ಷದಲಿ ನೀ ಬಂದಪ್ಪಿದಂತೆ...||
ಹಿತವಾದ ತಂಗಾಳಿ ನೀನು,|
ಮೆಲ್ಲನುಸುರಿದಂತೆ ಕಿವಿಯೊಳು..|||
ಕುಣಿದಾಡುವ ಬಯಕೆ ಎನ್ನೊಳು,|
ಚಿಗುರೊಡಿಯಿತು ಮಳೆಯೊಳು...!||
ನಿನ್ನ ನಗುವಿನ ಕಲರವ |
ಜಲಧಾರೆಯಂತೆ....||
ನಿನ್ನ ಹೆಜ್ಜೆಗಳ ಸಪ್ಪಳ
ಜಲಪಾತದಂತೆ....||
ಹೃದಯದಲಿ ಭೋರ್ಗರೆದಿದೆ|
ನಿನ್ನಯ ನೆನಪು..||
ಮನವನು ಸದಾ ಕಾಡುವುದು|
ನಿನ್ನಯ ಒನಪು...||
ನದಿಯು ತಾನು ಹರಿಯುವಂತೆ||
ಕಡಲಿನಕಡೆಗೆ...|
ಒಲವ ನದಿಯು ಹರಿದಿದೆ ನಿನ್ನಯಕಡೆಗೆ...||
ಹರುಷ ಚಿಮ್ಮಿ ಜಿಗಿಯಿತು ಆ ಬಾನಿನೆಡೆಗೆ..|.
ಎನ್ನ ಬದುಕ ಪಯಣವು,|
ನಿನ್ನಯ ಜೊತೆಗೇ...ನಲ್ಲೆ,
ನಿನ್ನಯ ಜೊತೆಗೇ...||
ಗಾಯತ್ರಿ..
"
,"""ಒಲವ ಮಳೆಯ ಪಯಣ,"""
----------------------------------+
ನಲ್ಲನೊಲುಮೆಯ ನಲ್ಲೆ,
ನಿಲ್ಲಬಾರದೇಕೆ ..
ನನ್ನೊಳು ನಿನಗೆ
ಹುಸಿ ಮುನಿಸೇಕೆ ?...
ನೀನಿರದ ಬಾಳು,ಮಳೆ |
ಬಾರದ ಇಳೆಯಂತೆ..||
ನೀನೆ ಎನಗೆ ಇನ್ನು,|
ಬಾಳ ಜೊತೆಯಂತೆ...||
ಹನಿ ಹನಿಯಲ್ಲೂ ನಿನ್ನ ದನಿಕೇಳಿದಂತೆ..!|.
ಆ ನೀರ ಸ್ಷರ್ಷದಲಿ ನೀ ಬಂದಪ್ಪಿದಂತೆ...||
ಹಿತವಾದ ತಂಗಾಳಿ ನೀನು,|
ಮೆಲ್ಲನುಸುರಿದಂತೆ ಕಿವಿಯೊಳು..|||
ಕುಣಿದಾಡುವ ಬಯಕೆ ಎನ್ನೊಳು,|
ಚಿಗುರೊಡಿಯಿತು ಮಳೆಯೊಳು...!||
ನಿನ್ನ ನಗುವಿನ ಕಲರವ |
ಜಲಧಾರೆಯಂತೆ....||
ನಿನ್ನ ಹೆಜ್ಜೆಗಳ ಸಪ್ಪಳ
ಜಲಪಾತದಂತೆ....||
ಹೃದಯದಲಿ ಭೋರ್ಗರೆದಿದೆ|
ನಿನ್ನಯ ನೆನಪು..||
ಮನವನು ಸದಾ ಕಾಡುವುದು|
ನಿನ್ನಯ ಒನಪು...||
ನದಿಯು ತಾನು ಹರಿಯುವಂತೆ||
ಕಡಲಿನಕಡೆಗೆ...|
ಒಲವ ನದಿಯು ಹರಿದಿದೆ ನಿನ್ನಯಕಡೆಗೆ...||
ಹರುಷ ಚಿಮ್ಮಿ ಜಿಗಿಯಿತು ಆ ಬಾನಿನೆಡೆಗೆ..|.
ಎನ್ನ ಬದುಕ ಪಯಣವು,|
ನಿನ್ನಯ ಜೊತೆಗೇ...ನಲ್ಲೆ,
ನಿನ್ನಯ ಜೊತೆಗೇ...||
ಗಾಯತ್ರಿ..
No comments:
Post a Comment